
ವಿಶ್ವ ಪರಿಸರ ದಿನಾಚರಣೆ ಬೆಥನಿ ಆಂಗ್ಲ ಮಾಧ್ಯಶಾಲೆ
- Posted by bethanympbes@gmail.com
- Categories Uncategorized
- Date June 5, 2025
- Comments 0 comment
ಬೆಥನಿ ಆಂಗ್ಲ ಮಾಧ್ಯಶಾಲೆ ಪಾಂಗ್ಲಾಯಿ ದರ್ಬೆ ಪುತ್ತೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಅನಿತಾ ಟ್ರೆಸ್ಸಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಇಂದಿನ ದಿನ ನಮ್ಮ ಶಾಲೆಯನ್ನು ಪ್ಲಾಸ್ಟಿಕ್ ಫ್ರೀ ಮಾಡುವ ಸಂಕಲ್ಪ ನಮ್ಮದಾಗಿದ್ದು ಎಲ್ಲಾ ವಿದ್ಯಾರ್ಥಿಗಳ ಸಹಕಾರ ಇರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ರಘುನಾಥ ರೈಯವರು ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಸಾಂಕೇತಿಕ ಆಚರಣೆಯಾಗದೆ ಪರಿಸರದ ಕುರಿತ ಪ್ರೀತಿ ಮತ್ತು ಜಾಗೃತಿ ನಿತ್ಯಾನುಷ್ಟಾನವಾಗಿರಬೇಕು. ಮತ್ತು ಪ್ರಸ್ತುತ ವರ್ಷದ ವಿಶ್ವ ಸಂಸ್ಥೆಯ ಧ್ಯೇಯ ವಾಕ್ಯ “ಪ್ಲಾಸ್ಟಿಕ್ ಮಾಲಿನ್ಯ ಮಣಿಸಿ” ಎಂಬ ವಾಕ್ಯವನ್ನು ಪ್ರತಿಯೊಬ್ಬರು ಪ್ಲಾಸ್ಟಿಕಿಗೆ ಪರ್ಯಾಯವಾದ ಬಟ್ಟೆ ಚೀಲ, ಸೆಣಬಿನ ಚೀಲ ಮುಂತಾದುವುಗಳನ್ನು ಬಳಕೆ ಮಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಮಾತನಾಡಿ ವಿಶ್ವಪರಿಸರ ದಿನಾಚರಣೆಯ ಆರಂಭದಿಂದ ಹಿಡಿದು 2025ನೇ ವಿಶ್ವಪರಿಸರ ದಿನಾಚರಣೆಯವರೆಗೂ ನಡೆದ ಇತಿಹಾಸದ ಕುರಿತು ಮೆಲಕು ಹಾಕಿದರು. ಶಾಲಾ ವಿದ್ಯಾರ್ಥಿನಿ ಮೊಹಮ್ಮದ್ ಅಲ್ಫಾನ್ ಸ್ವಾಗತಿಸಿ ಖದೀಜತ್ ಸುಹಾ ವಂದಿಸಿ ಕೆಲಿಡಾ ಜೋಶ್ನಾ ಡಿ’ ಅಲ್ಮೇಡಾ ಮತ್ತು ಶ್ರೀನಿಧಿ ಡಿ’ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
You may also like
