
ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿ ಮಂಡಲದ ಪ್ರಮಾಣ ವಚನ
- Posted by bethanympbes@gmail.com
- Categories News and Events
- Date June 20, 2025
- Comments 0 comment
ದಿನಾಂಕ 20.06.2025ರಂದು ಪುತ್ತೂರು ಪಾಂಗ್ಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ ಕುಮಾರಿ ವಿಯೋಲ್ಲಾ ಎಶಿತಾ ಮೊಂತೆರೋ, ನಾಯಕ ಮೆಲ್ ರೋಯಿ ಪಿರೇರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಸಿಸ್ಟರ್ ಪ್ರಶಾಂತಿ ಬಿ.ಎಸ್ ವಹಿಸಿ ಮಕ್ಕಳಿಗೆ ತಮ್ಮ ಜವಾಬ್ದಾರಿಗಳನ್ನು ನೆನಪಿಸುವುದರ ಜೊತೆಗೆ ಚುನಾಯಿತರಾದ ಅಭ್ಯರ್ಥಿಗಳನ್ನು ತಮ್ಮ ಮಾತುಗಳಿಂದ ಪ್ರೋತ್ಸಾಹಿಸಿದರು. ಸಭೆಯ ಮುಖ್ಯ ಅತಿಥಿಯಾಗಿ ಪುತ್ತೂರು ಠಾಣಾ ಸಬ್ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ ಅವರು ಉಪಸ್ಥಿತರಿದ್ದು ಮಕ್ಕಳ ಮುಂದಿನ ಭವಿಷ್ಯದ ಏಳಿಗೆಗೆ ಸಹಕಾರಿಯಾಗುವ ಅಂಶಗಳನ್ನು ಮನದಟ್ಟು ಮಾಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಬಪ್ಪಳಿಗೆ ಅವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಟ್ಟೆಸ್ಸಿ ಪ್ರಮಾಣ ವಚನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಿಕ್ಷಕಿ ಶ್ರೀಮತಿ ಅನಿತಾ ರೊಡ್ರಿಗಸ್ ಸ್ವಾಗತಿಸಿ, ಶಿಕ್ಷಕಿ ಜಾನೆಟ್ ಸಿಸ್ಟರ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.
You may also like
Care for the care takers

