
ಶಾಲೆಯಲ್ಲಿಸಂಸ್ಥಾಪನಾದಿನಾಚರಣೆಸಂಭ್ರಮ
- Posted by bethanympbes@gmail.com
- Categories News and Events
- Date July 15, 2025
- Comments 0 comment
ಪುತ್ತೂರು: ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಳಾಯಿಯಲ್ಲಿ ಜುಲೈ 15ರಂದು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ, ಸಂಸ್ಥಾಪಕರಾದ ಪೂಜ್ಯ ಗುರು, ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಮಸ್ಕರೇನ್ಹಸ್ ಅವರ ಜೀವನ ಮೌಲ್ಯಗಳನ್ನು ಬಿಂಬಿಸುವ ನೃತ್ಯ ರೂಪಕವು ಎಲ್ಲರ ಗಮನ ಸೆಳೆಯಿತು.
ಶಾಲಾ ಪ್ರಾಂಶುಪಾಲರಾದ ಭಗಿನಿ ಅನಿತಾ ಬಿ ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಸ್ಥಾಪನಾ ದಿನದ ಮಹತ್ವ ಕುರಿತು ಸಂದೇಶ ನೀಡಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ಈ ದಿನದ ಪ್ರಾಮುಖ್ಯತೆಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಿ ಬಹುಮಾನ ವಿತರಿಸಿ ಅಭಿನಂದಿಸಿದರು.
ವಿದ್ಯಾರ್ಥಿಗಳಾದ ಪೂರ್ವಿಕ ಮತ್ತು ಅನನ್ಯ ಕಾರ್ಯಕ್ರಮವನ್ನು ನಿರೂಪಿಸಿದರೆ, ಅಲೀಮ ಲೀನ ಸ್ವಾಗತಿಸಿ, ರಿಶಲ್ ರೈ ವಂದನಾರ್ಪಣೆ ಮಾಡಿದರು.
You may also like
PTA Meeting at Bethany Puttur
June 20, 2026
Care for the care takers
January 26, 2026

